Site icon ಸುದ್ದಿ ಸಂಗ್ರಹ

ಕರ್ನಾಟಕದ 5 IAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ: ಒಂದೆ ವಾರದಲ್ಲಿ 3ನೇ ಟ್ರಾನ್ಸ್‌ಫರ್‌ ಲಿಸ್ಟ್‌

ಬೆಂಗಳೂರು: ಕರ್ನಾಟಕ ಸರ್ಕಾರವು 5 ಜನ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಸೋಮವಾರ ಹೊರಡಿಸಿರುವ ಆದೇಶದಂತೆ ಪಂಚಾಯತ್‌ರಾಜ್‌ ಇಲಾಖೆ ಕಾರ್ಯದರ್ಶಿಯಾಗಿದ್ದ ಡಿ.ರಂದೀಪ್‌ ಅವರಿಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಎಂ.ಎಸ್‌ ದಿವಾಕರ್‌ ಅವರಿಗೆ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಹುದ್ದೆಗೆ ಹೆಚ್ಚುವರಿಯಾಗಿ ಅಟಲ್‌ ಜನ ಸ್ನೇಹಿ ಕೇಂದ್ರದ ನಿರ್ದೇಶಕ ಹುದ್ದೆ ನೀಡಲಾಗಿದೆ.

ನಿತೇಶ್‌ ಪಾಟೀಲ ಅವರಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ, ಆರ್‌.ರಾಮಚಂದ್ರನ್‌ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ, ಡಾ. ಬಿಸಿ ಸತೀಶ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕ ಹುದ್ದೆಗೆ ಸರ್ಕಾರವು ವರ್ಗಾವಣೆ ಮಾಡಿದೆ.

ವಾರದಲ್ಲಿ 3ನೇ ಬಾರಿ ವರ್ಗಾವಣೆ
ಸರ್ಕಾರವು ಈ ಹಿಂದೆ ಅ.5 ರಂದು ಮತ್ತು ಅ.10 ರಂದು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಒಂದು ವಾರದಲ್ಲಿ ಸತತ 3ನೇ ಬಾರಿ ಅಧಿಕಾರಿಗಳ ವರ್ಗಾವಣೆಯಾಗಿದೆ.

ವರ್ಗಾವಣೆಯಾದ ಐಎಎಸ್‌ ಅಧಿಕಾರಿಗಳು

ವಾರದಿಂದೀಚೆಗೆ ವರ್ಗಾವಣೆಯಾದ ಇತರೆ ಐಎಎಸ್‌ ಅಧಿಕಾರಿಗಳು ಯಾರು ?

Exit mobile version