Site icon ಸುದ್ದಿ ಸಂಗ್ರಹ

ಲಿಂಗೈಕ್ಕೆಕ್ಕೂ ಮುನ್ನ ತಮ್ಮ ಕೊನೆಯ ಆಸೆ ಈಡೇರಿಸಿಕೊಂಡ ಡಾ.ಶರಣಬಸಪ್ಪ ಅಪ್ಪ

ಕಲಬುರಗಿ: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪಾ (92) ಅವರು ಲಿಂಗೈಕ್ಯರಾಗಿದ್ದಾರೆ. ಡಾ. ಶರಣಬಸಪ್ಪ ಅಪ್ಪ ಅವರು ತಮ್ಮ ಅಂತಿಮ ಇಚ್ಛೆಯಂತೆ ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರು ಎಳೆದಿದ್ದಾರೆ.

ಗೃಹ ಆರೈಕೆಗೆಂದು ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲು ಕುಟುಂಬಸ್ಥರು ನಿರ್ಧರಿಸಿದರು.

ಅದರಂತೆ, ಡಾ. ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲಾಯಿತು. ಶರಣಬಸವೇಶ್ವರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ, ಡಾ. ಶರಣಬಸಪ್ಪ ಅಪ್ಪ ಅವರನ್ನು ಸಂಜೆ ಸುಮಾರು 7:30ಕ್ಕೆ ದಾಸೋಹಕ್ಕೆ ಕರೆದೊಯ್ಯಲಾಯಿತು. ಇಲ್ಲಿ ಡಾ.ಶರಣಬಸಪ್ಪ ಅಪ್ಪ ಅವರು ಕೊನೆಯುಸಿರು ಎಳೆದರು.

ಪ್ರಶಸ್ತಿ, ಗೌರವಗಳು

Exit mobile version