Site icon ಸುದ್ದಿ ಸಂಗ್ರಹ

ಶ್ರೇಷ್ಠ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ

ಕಲಬುರಗಿ: ಮಹಿಳಾ ಶಿಕ್ಷಣಕ್ಕೆ ಪ್ರಯತ್ನ, ಸ್ತಿçÃ-ಪುರುಷರ ನಡುವಿನ ಅಸಮಾನತೆ ನಿರ್ಮೂಲನೆ, ಜಾತಿ, ಧರ್ಮದ ಹೆಸರಿನ ಮೇಲೆ ನಡೆಯುತ್ತಿದ್ದ ವ್ಯಾಪಕ ಶೋಷಣೆ, ಮೌಢ್ಯತೆ, ಅಂಧಶೃದ್ಧೆ, ಅಸ್ಪೃಷ್ಯತೆ ಹೋಗಲಾಡಿಸಲು ನಿರಂತರವಾಗಿ ಇಡೀ ಜೀವನದುದ್ದಕ್ಕೂ ಹೋರಾಟ ಮಾಡಿದ ಮಹಾತ್ಮ ಜ್ಯೋತಿಬಾ ಫುಲೆಯವರು ಶ್ರೇಷ್ಠ ಸಮಜ ಸುಧಾರಕರಾಗಿದ್ದರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿಯ ಕರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಮಹಾತ್ಮ ಜ್ಯೋತಿಬಾ ಫುಲೆಯವರ 198ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ ಮಾತನಾಡಿ, ಬ್ರಿಟಿಷರ ಶೋಷಣೆಯಿಂದ ಸಾಮಾಜಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಸಂದರ್ಭವನ್ನು ಬಾಲ್ಯದಿಂದಲೇ ಕಂಡ ಫುಲೆಯವರು, ಮುಂದೆ ದೊಡ್ಡ ಪ್ರಮಾಣದ ಹೋರಾಟಕ್ಕೆ ಇದು ಸ್ಪೂರ್ತಿಯಾಯಿತು. ‘ಸತ್ಯ ಶೋಧಕ ಸಮಾಜ’ದ ಮೂಲಕ ಬಾಲ್ಯ ವಿವಾಹ, ವಿಧವೆಯರ ಶೋಷಣೆ ವಿರುದ್ಧ ಸಂಘಟಿತ ಹೋರಾಟ ಮಾಡಿದರು. ಶೋಷಿತ ಜನಾಂಗವು ಅನುಭವಿಸುತ್ತಿದ್ದ ಮೂಕ ರೋಧನೆಗೆ ಧ್ವನಿಯಾದರು ಎಂದರು.

ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಡಾ.ರಾಜಶೇಖರ ಪಾಟೀಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version