Site icon ಸುದ್ದಿ ಸಂಗ್ರಹ

₹10, ₹500 ಹೊಸ ನೋಟು ಬಿಡುಗಡೆ ಶೀಘ್ರ: ಆರ್‌ಬಿಐ

ಮುಂಬೈ: ಶೀಘ್ರವೇ ಮಹಾತ್ಮಗಾಂಧಿ ಅವರ ಭಾವಚಿತ್ರ ಮತ್ತು ಗವರ್ನರ್ ಸಂಜಯ್ ಮಲ್ಹೊತ್ರಾ ಅವರ ಸಹಿ ಇರುವ ₹10 ಮತ್ತು ₹500 ಮುಖಬೆಲೆಯ ಹೊಸ ನೋಟುಗಳ ಸರಣಿಯನ್ನು ಚಲಾವಣೆಗೆ ಬಿಡುಗಡೆ ಮಾಡಲಾಗುವದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಮಹಾತ್ಮಗಾಂಧಿ (ಹೊಸ) ಸರಣಿಯ ನೋಟುಗಳ
ಮಾದರಿಯಲ್ಲಿಯೇ ಈ ಹೊಸ ನೋಟುಗಳು ಇರಲಿವೆ ಎಂದು ಹೇಳಿದೆ.

ಗವರ್ನರ್ ಮಲ್ಹೊತ್ರಾ ಅವರ ಸಹಿ ಇರುವ ₹100 ಮತ್ತು ₹200 ಮುಖಬೆಲೆಯ ಹೊಸ ನೋಟುಗಳನ್ನೂ ಚಲಾವಣೆಗೆ ಬಿಡುಗಡೆ ಮಾಡುವದಾಗಿ ಕಳೆದ ತಿಂಗಳು ಆರ್‌ಬಿಐ ತಿಳಿಸಿತ್ತು.

Exit mobile version