Site icon ಸುದ್ದಿ ಸಂಗ್ರಹ

ಡಿಕೆಶಿ ನಟ್ಟು ಬೋಲ್ಟು ವಿವಾದ: ಡಿಸಿಎಂ ಹೇಳಿಕೆ ಸರಿಯಲ್ಲ ಎಂದ ರಮ್ಯಾ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ ಅವರು ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತಿನಿ ಎಂದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಹಾಗೆ ಮಾತನಾಡಬಾರದಿತ್ತು ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಅವರು ಹಾಗೆ ಮಾತನಾಡಬಾರದಿತ್ತು. ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ ಹೇಳಿಕೆ ತಪ್ಪು. ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಡಿಕೆಶಿ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡೋದು ಒಳ್ಳೆಯದು ಎಂದಿದ್ದಾರೆ ರಮ್ಯಾ.

ಫಿಲ್ಮ್ ಫೆಸ್ಟಿವಲ್‌ಗೆ ಒಂದು ವಾರದ ಹಿಂದೆಯೇ ನನಗೆ ಆಹ್ವಾನ ಬಂದಿದೆ. ಬೇರೆಯವರಿಗೆ ಆಹ್ವಾನ ಹೋಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಈಗ ಫಿಲ್ಮ್ ಫೆಸ್ಟಿವಲ್‌ಗೆ ಹೋಗ್ತಿದ್ದಿನಿ. ಈ ವೇಳೆ ನಾಡು, ನುಡಿ, ಜಲದ ವಿಚಾರದಲ್ಲಿ ಯಾವುದೆ ಆಹ್ವಾನ ಬೇಕಿಲ್ಲ. ಎಲ್ಲರೂ ಅವರಾಗಿಯೇ ಬರಬೇಕು. ಇದು ಮದುವೆ, ಪಾರ್ಟಿ ಅಲ್ಲ. ಇವತ್ತು ಮಧ್ಯಾಹ್ನ ನಾನೂ ಫಿಲ್ಮ್ ಫೆಸ್ಟಿವಲ್‌ಗೆ ಹೋಗುತ್ತಿದ್ದೆನೆ ಎಂದಿದ್ದಾರೆ.

Exit mobile version