Site icon ಸುದ್ದಿ ಸಂಗ್ರಹ

ಗ್ಯಾಸ್ ಸೋರಿಕೆಯಿಂದ ಪದೆ ಪದೆ ಅಗ್ನಿ ಅವಘಡ: ಏಜೆನ್ಸಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪದೆ ಪದೆ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡದಲ್ಲಿ ಸಾಕಷ್ಟು ಸಾವು ನೋವುಗಳ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತಿದೆ.

ಇದೆ ಮೊದಲ ಬಾರಿಗೆ ಗ್ಯಾಸ್ ಕಂಪನಿ ಹಾಗೂ ಏಜೆನ್ಸಿ ವಿರುದ್ಧ ಬೇಗೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಗ್ಯಾಸ್ ಲೀಕ್, ಗ್ಯಾಸ್ ಸ್ಫೋಟಕ್ಕೆ ಯಾವುದೆ ಕೇಸ್ ದಾಖಲಾಗುತ್ತಿರಲಿಲ್ಲ. ಇದೀಗ ಪ್ರೈವೆಟ್ ಗ್ಯಾಸ್ ಕಂಪನಿ ಮಾಲೀಕ ಚೋಟಾ ಸಿಕಂದರ್ ಮೇಲೆ ಎಫ್‌ಐಆರ್ ದಾಖಲಾಗಿದೆ.

ಎಲ್‌ಎಲ್‌ಬಿ ವಿದ್ಯಾರ್ಥಿನಿ ಜಾಹ್ನವಿ ನೀಡಿದ ದೂರಿನ ಮೇಲೆ ಬೇಗೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಾಹ್ನವಿ ತಂದೆ ಪಶ್ಚಿಮ ಬಂಗಾಳ ಮೂಲದ ನೇತ್ಯಾ ನಯ್ಯ ಎಂಬುವರಿಗೆ ಮನೆ ಬಾಡಿಗೆಗೆ ಕೊಟ್ಟಿದ್ದರು. ಇದೆ ತಿಂಗಳ 1ನೇ ತಾರೀಖು ಸಿಲಿಂಡರ್ ಬ್ಲ್ಯಾಸ್ಟ್‌ ಆಗಿ ನೇತ್ಯಾ ನಯ್ಯ ಹಾಗೂ ಅವರ ಪತ್ನಿ ಗಂಭೀರ ಗಾಯಗೊಂಡಿದ್ದರು‌.

ಸಿಲಿಂಡರ್ ಬ್ಲ್ಯಾಸ್ಟ್‌ಗೆ ಖಾಸಗಿ ಪ್ರೈವೆಟ್ ಸಿಲಿಂಡರ್ ಕಂಪನಿ ಏಜೆನ್ಸಿಯೆ ಕಾರಣ. ಹೀಗಾಗಿ ಮಾಲೀಕ ಚೋಟಾ ಸಿಕಂದರ್ ಡಿಸ್ಟ್ರಿಬ್ಯೂಟರ್ ನೈಸ್ ಎಸ್‌ಕೆಎಲ್ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ದೂರಿನನ್ವಯ ಬಿಎನ್‌ಎಸ್ 125(ಎ), 287, 324(2) ಅಡಿ ಎಫ್‌ಐಆರ್ ದಾಖಲಾಗಿದೆ.

Exit mobile version