Site icon ಸುದ್ದಿ ಸಂಗ್ರಹ

ಉತ್ತರ ಕನ್ನಡ ಸಂಸದ ಕಾಗೇರಿ ಮನೆಯಲ್ಲಿ ಚಿರತೆ ಪ್ರತ್ಯಕ್ಷ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ಆಹಾರ ಅರಸಿ ಬಂದ ಚಿರತೆಯೊಂದು ನುಗ್ಗಿದ್ದು, ಸಂಸದರ ಮನೆಯ ಸಾಕುನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ.

ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಕುಟುಂಬದ ಸದಸ್ಯರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.

ಇದೆ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು, ಮನೆಯ ಮುಂಭಾಗದಲ್ಲಿದ್ದ ಸಾಕುನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಸಾಕು ನಾಯಿ ತಪ್ಪಿಸಿಕೊಂಡಿದೆ. ರಾತ್ರಿ ಮನೆಯ ನಾಯಿ ಹೆಚ್ಚು ಕೂಗಿದ್ದರಿಂದಾಗಿ, ಇಂದು ಬೆಳಗ್ಗೆ ಮನೆಯವರು ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಚಿರತೆ ಮನೆಗೆ ಬಂದ ವಿಷಯ ತಿಳಿದಿದೆ.

ಘಟನೆ ಸಂಬಂಧ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದೆ, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಚಿರತೆ ಇವರ ಮನೆಬಾಗಿಲಿಗೆ ಬಂದರು ಯಾವುದೇ ತೊಂದರೆಯಾಗಿಲ್ಲ. ಇನ್ನು ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದೆ, ಇತ್ತೀಚೆಗೆ ಅಹಾರ ಅರಸಿ ನಾಡಿನತ್ತ ಆಗಮಿಸುತಿದೆ. ಇದೆ ಮೊದಲ ಬಾರಿ ಕಾಗೇರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.

Exit mobile version