ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವು ಹುಟ್ಟು ಹಬ್ಬ ಆಚರಿಸದಿರುವ ನನ್ನ ನಿರ್ಧಾರವನ್ನು ಒಪ್ಪಿ ರಾಜ್ಯದ್ಯಂತ ಹಲವಾರು ಜನ ಕಾರ್ಯಕರ್ತರು, ಅಭಿಮಾನಿಗಳು ಅಸಂಖ್ಯಾತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸರ್ವರಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ಅವರು, ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ತೋರುವ ವಾತ್ಸಲ್ಯ, ಅಭಿಮಾನ ಮತ್ತು ಕಾಳಜಿಗೆ ನಾನೆಂದಿಗೂ ಚಿರಋಣಿ. ನಿಮ್ಮೆಲ್ಲರ ಅದಮ್ಯ ಪ್ರೀತಿಯೇ ನನ್ನ ಕೆಲಸಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದಿದ್ದಾರೆ.
ನನ್ನ ಕೆಲಸದಿಂದ ಯಾರಿಗಾದರೂ ಸಹಾಯವಾದರೆ,
ಅದು ನೀವು ನನ್ನ ಮೇಲಿಟ್ಟಿರುವ ನಂಬಿಕೆಯಿಂದ
ಮಾತ್ರ ಸಾಧ್ಯವಾದದ್ದು. ರಾಜ್ಯಾದ್ಯಂತ ಹಲವಾರು
ಜನ ಕಾರ್ಯಕರ್ತರು, ಅಭಿಮಾನಿಗಳು ಅಸಂಖ್ಯಾತ
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಡವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿರುವುದು, ಆರೋಗ್ಯ ಶಿಬಿರಗಳು ಆಯೋಜಿಸಿರುವುದು, ಆಸ್ಪತ್ರೆಗಳಲ್ಲಿ ಹಣ್ಣುಗಳು ವಿತರಿಸಿರುವುದು, ಅನ್ನದಾಸೋಹ ನಡೆಸಿರುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳು ನೀಡಿರುವುದು, ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಮೈಸೂರು, ಮಂಡ್ಯ ಭಾಗದಲ್ಲಿ ಸಂವಿಧಾನ ಓದುವ ಕಾರ್ಯಕ್ರಮ, ಕಲಬುರಗಿಯಲ್ಲಿ ಸಾವಿರಾರು ಪೌರಕಾರ್ಮಿಕರಿಗೆ ಸೀರೆ, ಪ್ಯಾಂಟ್ ಹಾಗೂ ಶರ್ಟ್‌ಗಳ ವಿತರಣೆ, ನೂರಾರು ವಿಶೇಷ ಚೇತನರಿಗೆ ಬ್ಲಾಂಕೆಟ್’ಗಳ ವಿತರಣೆ, ನೂರಾರು ಪತ್ರಿಕಾ ವಿತರಕರಿಗೆ ಸ್ವೆಟರ್ ಹಂಚಿಕೆ, ಕಣ್ಮಣಿ ಎಂಬ ಕಾರ್ಯಕ್ರಮ ಆಯೋಜಿಸಿ ದೃಷ್ಟಿದೋಷ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ನಾಡಿನಾದ್ಯಂತ ಹಲವು ಜಿಲ್ಲೆಗಳಲ್ಲಿ ವಿವಿಧ ರೀತಿ ಸಮಾಜಮುಖಿ ಕಾರ್ಯಗಳು ಕೈಗೊಂಡು, ಪ್ರೀತಿ ತೋರಿಸಿ ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಿರಿ. ನಿಮ್ಮೆಲ್ಲರ ಸ್ವಯಂ ಪ್ರೇರಣೆಯ ಕಾರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೆನೆ ಎಂದಿದ್ದಾರೆ.
ಅಸಂಖ್ಯಾತ ಜನ ಕರೆ ಮಾಡಿ ಹುಟ್ಟು ಹಬ್ಬದ
ಶುಭಾಶಯಗಳು ಕೋರಲು ಯತ್ನಿಸಿದ್ದಿರಿ ಹಾಗೂ
ಮೆಸೇಜ್ ಕಳಿಸಿ ಶುಭಾಶಯ ಕೋರಿದ್ದಿರಿ, ಆದರೆ
ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಲು
ಸಾಧ್ಯವಾಗದಿರುವುದಕ್ಕೆ ಈ ಮೂಲಕ ಕ್ಷಮೆ
ಕೋರುತ್ತೆನೆ. ನಿಮ್ಮೆಲ್ಲರ ಈ ಅಚಲ ನಂಬಿಕೆಗೆ ಚ್ಯುತಿ ಬಾರದಂತೆ ಪ್ರತಿ ದಿನ, ಪ್ರತಿ ಕ್ಷಣವೂ ಆ ನಂಬಿಕೆ
ಉಳಿಸಿಕೊಂಡು ಹೋಗಲು ನನ್ನ ಪ್ರಾಮಾಣಿಕ
ಪ್ರಯತ್ನ ನಿರಂತರವಾಗಿರಲಿದೆ. ನಿಮ್ಮೆಲ್ಲರ ಶುಭ
ಹಾರೈಕೆಗಳಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.
ನಿಮ್ಮ ಈ ಪ್ರೀತಿಗೆ ನಮ್ಮ ಇಡಿ ಕುಟುಂಬ ಸದಾ
ಆಭಾರಿ ಮತ್ತು ಚಿರಋಣಿಯಾಗಿರಲಿದ್ದೆವೆ ಎಂದು
ಬರೆದುಕೊಂಡಿದ್ದಾರೆ.