ಕೊಲೆಯತ್ನ ಆರೋಪ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅರೆಸ್ಟ್

ಜಿಲ್ಲೆ

ಕಲಬುರಗಿ: ಕೊಲೆಯತ್ನ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ನೆಲೋಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಬಳಿ ಮಣಿಕಂಠ ರಾಠೋಡ ಅವರನ್ನು ಬಂಧಿಸಲಾಗಿದೆ. ಗುರುವಾರ ತಡರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಾಟಿ ಔಷಧಿ ಕೊಡುತ್ತಿದ್ದ ರಶೀದ್ ಮುತ್ಯಾ ಬಂಧನಕ್ಕೆ ಮಣಿಕಂಠ ರಾಠೋಡ ಆಗ್ರಹಿಸಿದ್ದರು. ಅಲ್ಲದೆ ಬೆಂಬಲಿಗರೊಂದಿಗೆ ಗ್ರಾಮಕ್ಕೆ ತೆರಳಿ ದೊಡ್ಡ ಹೈಡ್ರಾಮ ಕ್ರಿಯೇಟ್ ಮಾಡಿದ್ದರು. ಈ ವೇಳೆ ರಶೀದ್ ಮುತ್ಯಾ ಕಾರು ಚಾಲಕನ ತಲೆಗೆ ಕಲ್ಲೇಟು ಬಿದ್ದಿತ್ತು. ಸದ್ಯ ರಶೀದ್ ಮುತ್ಯಾ ಚಾಲಕನ ದೂರಿನ ಮೇರೆಗೆ ಮಣಿಕಂಠ ರಾಠೋಡ ಅವರನ್ನು ಬಂಧಿಸಲಾಗಿದೆ.

ಕೊಲೆಯತ್ನ ಆರೋಪದಡಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದ ಬೆನ್ನಲ್ಲೆ ಪೊಲೀಸರು ಮಣಿಕಂಠ ರಾಠೋಡ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *