ಚಿತ್ತಾಪುರ: ನವರಾತ್ರಿ ಉತ್ಸವದ ನಿಮಿತ್ಯ ಏರ್ಪಡಿಸಲಾಗಿದ್ದ ನೃತ್ಯ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ್ ಏರಿಯಾದಲ್ಲಿ ಮೂರನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದ ನಿಮಿತ್ಯ ಶಾಲೆಗಳ ಮಕ್ಕಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಪ್ರಾರ್ಥನಾ ಶಾಲೆಯ ವಿದ್ಯಾರ್ಥಿಗಳು ಮತ್ತು ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಂಕರ್ ಚೋಕ್ಲಾ ಚೌವ್ಹಾಣ್, ರವಿ ಜಯರಾಮ್ ರಾಠೋಡ, ವೆಂಕಿ ಜಾಧವ್, ವಿನೋದ್ ಚೋಕ್ಲಾ ಚೌಹಾನ್ ಮತ್ತು ರಮೇಶ್ ಹನುಮ ಪವಾರ ಕಾರ್ಯಕ್ರಮದ ನಿರ್ಣಾಯಕರಾಗಿದ್ದರು. ಕಲೆಯಲ್ಲಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಕಲೆ ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ಪ್ರಾರ್ಥನಾ ಶಾಲಾ ತಂಡದ ವಿದ್ಯಾರ್ಥಿಗಳು ಪ್ರಥಮ ಬಹುಮಾನವಾಗಿ 5,000 ರೂ. ಮತ್ತು ಪ್ರಶಸ್ತಿ ಪತ್ರ ಪಡೆದರು, ದ್ವಿತೀಯ ವಿಜೇತರಾಗಿ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು 2,500 ರೂ. ಮತ್ತು ಪ್ರಶಸ್ತಿ ಪತ್ರ ಪಡೆದರು. ಅದೆ ರೀತಿ ಅತ್ಯುತ್ತಮ ಕಲಾ ಪ್ರದರ್ಶನ ಮಾಡಿದಕ್ಕಾಗಿ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿನಿ ಚೈತ್ರ ರವರು 500 ರೂ ಬಹುಮಾನ ಪಡೆದರು.
ಒಳ್ಳೆಯ ಭರತನಾಟ್ಯ ಕಲಾ ಪ್ರದರ್ಶನ ಮಾಡಿದರು, ಕಾರ್ಯಕ್ರಮದುದ್ದಕ್ಕೂ ಮಳೆರಾಯನ ಆರ್ಭಟ ಜೋರಾಗಿತ್ತು, ಮಳೆಯ ಮಧ್ಯೆಯೂ ಶಾಲಾ ಮಕ್ಕಳು ಕಲಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ತಾಂಡಾದ ನಾಯಕ ತುಕಾರಾಮ ಖೀರು ನಾಯಕ, ಜೈ ಮಾತಾ ದಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಶಂಕರ್ ಚೌಹಾನ್, ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಖುಬ್ಬು ರಾಠೋಡ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಪಾಂಡು ಚೌಹಾಣ್, ಸಾಗರ್ ಚೌಹಾನ್, ಆಕಾಶ್ ರಾಠೋಡ್, ರೋಹಿತ್ ಪವಾರ್, ರಾಹುಲ್ ರಾಠೋಡ, ಸತೀಶ್ ರಾಠೋಡ, ಶಿವರಾಮ್ ಚೌಹಾಣ್, ನಿತೇಶ್ ರಾಠೋಡ, ಅಶ್ವತ್ ರಾಠೋಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದರು.
ಶಾಲಾ ಮಕ್ಕಳ ಕಲಾ ಪ್ರದರ್ಶನ
ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ
ತುಕಾರಾಮ್ ಖೇರು ನಾಯಕ್ ಏರಿಯಾದಲ್ಲಿ
ಮೂರನೇ ವರ್ಷದ ನವರಾತ್ರಿ ಕಾರ್ಯಕ್ರಮದ ನಿಮಿತ್ಯ
ಶಾಲೆಗಳ ಮಕ್ಕಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಶಾಲೆಯ
ವಿದ್ಯಾರ್ಥಿಗಳು ಹಾಗೂ ಎಕ್ಸಲೆಂಟ್ ಶಾಲೆಯ
ವಿದ್ಯಾರ್ಥಿಗಳು ಭಾಗವಹಿಸಿದರು ಕಾರ್ಯಕ್ರಮದ
ನಿರ್ಣಾಯಕರಾಗಿ ಶಂಕರ್ ಚೋಕ್ಲಾ ಚೌಹಾನ್ ರವಿ
ಜಯರಾಮ್ ರಾಠೋಡ್ ಹಾಗೂ ವೆಂಕಿ ಜಾದವ್
ವಿನೋದ್ ಚೋಕ್ಲಾ ಚೌಹಾನ್ ರಮೇಶ್ ಹನುಮ
ಪವಾರ ಆಗಿದ್ದರು .
ಈ ಒಂದು ಕಲಾ ಸ್ಪರ್ಧೆಯಲ್ಲಿ
ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಳ್ಳೆಯ
ರೀತಿಯಿಂದ ಕಲಾ ಪ್ರದರ್ಶಿಸಿದರು ಈ ಸ್ಪರ್ಧೆಯ
ಕಲೆಯಲ್ಲಿ ವಿಜೇತರಾಗಿ ಪ್ರಾರ್ಥನಾ ಶಾಲೆಯ
ವಿದ್ಯಾರ್ಥಿಗಳು ಪ್ರಥಮ ಬಹುಮಾನವಾಗಿ 5000
ಹಾಗೂ ಪ್ರಶಸ್ತಿ ಪ್ರಶಂಸೆ ಪತ್ರವನ್ನು ಪಡೆದುಕೊಂಡರು
ಅದೇ ರೀತಿಯಾಗಿ ದ್ವಿತೀಯ ವಿಜೇತರಾಗಿ ಎಕ್ಸಲೆಂಟ್
ಶಾಲೆಯ ವಿದ್ಯಾರ್ಥಿಗಳು 2500, ಹಾಗೂ ಪ್ರಶಸ್ತಿ
ಪತ್ರವನ್ನು ಪಡೆದುಕೊಂಡರು ಅದೇ ರೀತಿಯಾಗಿ
ಅತ್ಯುತ್ತಮ ಕಲಾ ಪ್ರದರ್ಶನ ಮಾಡಿದಕ್ಕಾಗಿ ಎಕ್ಸಲೆಂಟ್
ಶಾಲೆಯ ವಿದ್ಯಾರ್ಥಿನಿ ಚೈತ್ರ ರವರು 500
ರೂಪಾಯಿಗಳ ಬಹುಮಾನ ವನ್ನು ಪಡೆದುಕೊಂಡರು
ಒಂದು ಒಳ್ಳೆಯ ಭರತನಾಟ್ಯ ಕಲಾ ಪ್ರದರ್ಶನ
ಮಾಡಿದರು ಕಾರ್ಯಕ್ರಮದ ಉದ್ದಕ್ಕೂ ಮಳೆರಾಯನ
ಆರ್ಭಟ ಜೋರಾಗಿತ್ತು ಮಳೆಯ ಮಧ್ಯಯೂ ಕೂಡಾ
ಶಾಲೆಯ ಮಕ್ಕಳು ತಮ್ಮ ಕಲಾ ಪ್ರದರ್ಶನ ಮಾಡಿದರು
ಈ ಸಂದರ್ಭದಲ್ಲಿ ತಾಂಡಾದ ನಾಯಕರಾಗಿರುವ
ತುಕಾರಾಮ ಖೀರು ನಾಯಕ ಜೈ ಮಾತಾ ದಿ ನವರಾತ್ರಿ
ಉತ್ಸವ ಸಮಿತಿಯ ಅಧ್ಯಕ್ಷರಾಗಿರುವ ಅನಿಲ್ ಶಂಕರ್
ಚೌಹಾನ್ ಹಾಗೂ ನಾಗೇಂದ್ರ ಖುಬ್ಬು ರಾಥೋಡ್
ಪ್ರಧಾನ ಕಾರ್ಯದರ್ಶಿ ಲಕ್ಷಣ ಪಾಂಡು ಚೌಹಾಣ್
ಸಾಗರ್ ಚೌಹಾನ್ ಆಕಾಶ್ ರಾಥೋಡ್ ರೋಹಿತ್
ಪವಾರ್ ರಾಹುಲ್ ರಾಠೋಡ್ ಸತೀಶ್ ರಾಥೋಡ್
ಶಿವರಾಮ್ ಚೌಹಾಣ್ ನಿತೇಶ್ ರಾಥೋಡ್ ಅಶ್ವತ್
ರಾಥೋಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ
ಸಾರ್ವಜನಿಕರು ಪಾಲ್ಗೊಂಡಿದರು.