Site icon ಸುದ್ದಿ ಸಂಗ್ರಹ

ಭಂಕೂರ: ಡಾ.ಅಂಬೇಡ್ಕರ್‌ ಜಯಂತೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಸುದ್ದಿ ಸಂಗ್ರಹ ಶಹಾಬಾದ್
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸುರೇಶ್ ಮೆಂಗನ್ ಅವರ ಅಧ್ಯಕ್ಷತೆಯಲ್ಲಿ ಭಂಕೂರ ಗ್ರಾಮದ ಬುದ್ಧ ಬಸವ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ಭರತ್ ಧನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯಂತೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಲಿಂಗಪ್ಪ ಗುಜ್ಜನ್, ಅಧ್ಯಕ್ಷ ನಾಗರಾಜ್ ಕೆ ಧನ್ನಾ, ಉಪಾಧ್ಯಕ್ಷ ಸಿದ್ದಾರ್ಥ್ ಧನ್ನಾ, ಸುನಿಲ್ ಕಟ್ಟಿಮನಿ, ನಾಗರಾಜ್ ವಗ್ಗನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸರಡಗಿ, ಸಹ ಕಾರ್ಯದರ್ಶಿ ತೇಜಶ್ ಧನ್ನಾ, ಸಹ ಕಾರ್ಯದರ್ಶಿ ಶಿವಯೋಗಿ ಧನ್ನಾ, ಖಜಾಂಚಿ ಪೃಥ್ವಿ ಕೋಬಾಲ್ಕರ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶರಣಬಸಪ್ಪ ಧನ್ನಾ, ಶಿವಯೋಗಿ ಬಣಮಿಕರ್, ಶಂಕರ್ ಜಾನಾ ಉಪಸ್ಥಿತರಿದ್ದರು.

Exit mobile version