Site icon ಸುದ್ದಿ ಸಂಗ್ರಹ

ವಾಡಿಯಲ್ಲಿ ಬಿಜೆಪಿ ಸಂಸ್ಥಾಪನ ದಿನ ಆಚರಣೆ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಶ್ರೀ ಹಿಂಗುಲಾಂಬಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು.

ಪಕ್ಷದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪಕ್ಷದ ಮುಖಂಡರು ಪುಷ್ಪನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡು ಜೈ ಘೋಷಿಸಿದರು.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ರಾಷ್ಟ್ರೀಯ ಚಿಂತನೆಗಳ ಮೂಲಕ ಪಕ್ಷದೊಂದಿಗೆ ತಾಯ್ನಾಡಿನ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ನಮ್ಮ ಹಿರಿಯರನ್ನು ಈ ಸಂದರ್ಭದಲ್ಲಿ ಸ್ಮರಿಸಿ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯಾಗಿದೆ ಎಂದರು.

ನಮ್ಮ ಪಕ್ಷದ ಮೂಲವನ್ನು 1951ರಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ದೆಹಲಿಯಲ್ಲಿ ಭಾರತೀಯ ಜನಸಂಘ ಸ್ಥಾಪಿಸಿದಾಗಿನಿಂದ ಗುರುತಿಸಬಹುದು. ನಂತರ 1975-77ರಲ್ಲಿ ಪಕ್ಷವು ಇತರ ರಾಜಕೀಯ ಪಕ್ಷಗಳೊಂದಿಗೆ ವಿಲೀನಗೊಂಡು ಜನತಾ ಪಕ್ಷ ರಚನೆಯಾಯಿತು.

1957ರ ಲೋಕಸಭಾ ಚುನಾವಣೆಯಲ್ಲಿ ಕೇವಲ 4 ಸ್ಥಾನ, 1962ರಲ್ಲಿ 14, 1967ರಲ್ಲಿ 35 ಸ್ಥಾನಗಳು ಮತ್ತು 1977ರಲ್ಲಿ ಜನತಾ ಸಂಘವು ಇತರ ಪಕ್ಷಗಳೊಂದಿಗೆ ವಿಲೀನಗೊಂಡು ಜನತಾ ಪಕ್ಷ ರಚಿಸಿದಾಗ, ಅವರು ಮೊರಾರ್ಜಿ ದೇಶಾಯಿ ನೇತೃತ್ವದಲ್ಲಿ ಲೋಕಸಭೆಯಲ್ಲಿ 295 ಸ್ಥಾನಗಳು ಗೆದ್ದು ಸರ್ಕಾರ ರಚಿಸಿದರು. ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಜನತಾ ಪಕ್ಷವು ಭುಗಿಲೆದ್ದಿತು, ಇದರ ಪರಿಣಾಮ 1980ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲು ಅನುಭವಿಸಿತು. ಅಂತಿಮವಾಗಿ, ಏಪ್ರಿಲ್ 6, 1980ರಂದು, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಹೊಸ ಭಾರತೀಯ ಜನತಾ ಪಕ್ಷವನ್ನು ರಚಿಸಲಾಯಿತು ಮತ್ತು ಅದರ ಮೊದಲ ಅಧ್ಯಕ್ಷರಾದರು.
ಅಂದಿನಿಂದ ಇಲ್ಲಿಯವರೆಗೆ ಕೋಟ್ಯಾಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಪರಿಣಾಮದಿಂದ ಜಗತ್ತಿನಲ್ಲೇ ಬೃಹತ್ ಪಕ್ಷವಾಗಿ, ದೇಶದ ಪ್ರಧಾನಿ ಮೋದಿಜಿ ಅವರು ವಿಶ್ವದ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿ ರಾಷ್ಟ್ರದ ಹಿರಮೆ ಸಾರಲಿಕ್ಕೆ ಸಾಧ್ಯವಾಗದೆ ಎಂದರು.

ಈ ಸಂಧರ್ಭದಲ್ಲಿ ಮುಖಂಡರಾದ ನಾಗರಾಜಗೌಡ ಗೌಡಪ್ಪನೂರ, ಮಹಾಂತೇಶ ಬಿರಾದಾರ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ಅಶೋಕ ಪಂಚಾಳ, ವಿಶ್ವನಾಥ ಪುಲ್ಸೆ, ವಿಜಯಕುಮಾರ ಸುತ್ರಾವೆ, ಶ್ರೀಕಾಂತ ಕಾನಕುರ್ತೆ, ಶಾಂತಪ್ಪ ಪರಿಟ್, ಶ್ರೀನಿವಾಸ ರಾಂಪೂರಳ್ಳಿ ಸೇರಿದಂತೆ ಅನೇಕರು ಇದ್ದರು.

Exit mobile version