Site icon ಸುದ್ದಿ ಸಂಗ್ರಹ

ಮಾನವೀಯ ಮೌಲ್ಯಗಳೇ ನಿಜವಾದ ಧರ್ಮ

ಸುದ್ದಿ ಸಂಗ್ರಹ ಶಹಾಬಾದ
ಪ್ರತಿಯೊಂದು ಕೆಲಸದಲ್ಲಿ ದೇವರನ್ನು ಕಾಣುವದು ನಿಜವಾದ ಧರ್ಮವಾಗಿದ್ದು, ಮಾನವನ ಮಾನವೀಯ ಮೌಲ್ಯಗಳೆ ನಿಜವಾ ಧರ್ಮ ಎಂದು ಕಲಬುರಗಿ ಚರ್ಚ್ ಫಾದರ್ ಪ್ರವೀಣ್ ಹೇಳಿದರು.

ನಗರದ ಲಕ್ಷ್ಮಿ ಗಂಜನಲ್ಲಿರುವ ಸಂತ್ ತೋಮಾಸ್ ಚರ್ಚಿನಲ್ಲಿ ರಂಜಾನ್ ನಿಮಿತ್ತ ನಡೆದ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಪರಸ್ಪರ ಸಹಕಾರ, ಸಹ ಬಾಳ್ವೆಯಿಂದ ಜೀವನ ನಡೆಸಬೇಕು, ಪ್ರತಿಯೊಂದು ಕೆಲಸದಲ್ಲಿ ದೇವರನ್ನು ಕಾಣುವದು ನಿಜವಾದ ಧರ್ಮವಾಗಿದೆ ಎಂದರು.

ಜಾಮೀಯಾ ಮಜೀದ್ ಸಮಿತಿಯ ಅಧ್ಯಕ್ಷ ಮತೀನ್ ಸೇಠ್ ಮಾತನಾಡಿ, ಚರ್ಚಿನ ಧರ್ಮಗುರುಗಳು ಸೌಹಾರ್ದಯುತ ಕೂಟ ಏರ್ಪಡಿಸಿದ್ದು, ದೇವರ ಪ್ರೇರಣೆಯಾಗಿದೆ. ಇದರಿಂದ ಸಮಾಜಕ್ಕೆ ಸಹೋದರತೆಯ ಹೊಸ ಮಾರ್ಗಸಿಕ್ಕಿದೆ, ಈ ಮೂಲಕ ಶಹಾಬಾದ್ ನಗರ ಶಾಂತಿ, ಸೌಹಾರ್ದತೆಗೆ ಪ್ರೇರಣೆ ನೀಡಿದೆ ಎಂದರು.

ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮದವರನ್ನು ಸೇರಿಸುವ ಮೂಲಕ ಸೌಹಾರ್ದ ಸಮ್ಮೇಳನ ನಡೆಸುವ ಫಾದರ್ ಜೇರಾಲ್ಡ್ ಸಾಗರ ಅವರ ಯೋಚನೆಗೆ ಎಲ್ಲಾ ಸಹಕಾರ ನೀಡುವುದು ಎಂದರು.

ಸಂತ್ ತೋಮಾಸ್ ಚರ್ಚಿನ ಫಾದರ್ ಜೇರಾಲ್ಡ್ ಸಾಗರ ಮತ್ತು ಶಹಾಬಾದ್ ಜಾಮೀಯಾ ಮಜೀದ್‌ನ ಮ.ಮುಫ್ತಿಯವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮ.ರಫೀಕ್ ಬಾಗಬಾನ, ಮ.ಅಲಿ ಅಫಸರ್ ಸೇಠ್, ಅಬ್ದುಲ್ ಖದೀರ, ಮ.ಮಸ್ತಾನ, ಶಂಶೋದ್ದೀನ್, ಡಾ.ಅಹ್ಮದ ಪಟೇಲ, ಮ.ದಸ್ತಗೀರ್, ಮಂಜೂರ ಸೇಠ್, ಜೋಸಫ್ ಮುತ್ತು, ಅಮೀನ್ ನಾದನ್ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಕುರಾನ್, ಬೈಬಲ್‌ನ ಶಾಂತಿ ಮಂತ್ರಗಳು ಪಠಿಸಲಾಯಿತು.

Exit mobile version