ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದಲ್ಲಿರುವ ಕಡಬೂರ ಗಲ್ಲಿಯಲ್ಲಿನ ಪೆದ್ದು ಮಠದಲ್ಲಿ
ರೇಣುಕಾಚಾರ್ಯರ ಜಯಂತಿಯನ್ನು ಮಠದ ಪೀಠಾಧ್ಯಕ್ಷ ದಿಗ್ಗಾಂವದ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜ್ಞಾನಜ್ಯೋತಿ ಪ್ರವಚನ ಕಾರ್ಯಕ್ರಮದ ಸಮಾರೋಪ
ನಡೆಯಿತು. ಶ್ರೀಗಳು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬೆಳಗ್ಗೆ ಮಠದಲ್ಲಿ ಸಿದ್ಧವೀರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ತೊಟ್ಟಿಲು ಉತ್ಸವ,
ಮಹಾಂಗಲ ನಂತರ ಪ್ರಸಾದ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಅವಂಟಿ, ಗಂಗಾಧರಯ್ಯ ಸ್ವಾಮಿ ಹಿರೇಮಠ, ಬಸಯ್ಯ ಸ್ವಾಮಿ ಸಾತನೂರು, ಚಂದ್ರಪ್ರಕಾಶ ತಿರ್ಮಲ್, ಶರಣಗೌಡ ಪಾಟೀಲ್ ಮರಗೋಳ, ಬನ್ನಯ್ಯ ಸ್ವಾಮಿ ರಾಜೋಳಿ, ಮಲ್ಲಿಕಾರ್ಜುನ ಕೋಟಿಗಿ ಬೆನಕನಳ್ಳಿ ಧೂಳಪ್ಪ ಅವಂಟಿ ಕೋಡ್ಲಾ, ಉಮೇಶ ಸಾಸಬಾಳ ದಿಗ್ಗಾಂವ, ದೇವೇಂದ್ರಪ್ಪ ಸಜ್ಜನ್, ಮಲ್ಲಣ್ಣ ಮಾಡಗಿ, ಸುಭಾಷ ಸರಡಗಿ, ಕಾಶಣ್ಣ ಸುಲ್ತಾನಪುರ ಇದ್ದರು.
ಶರಣು ಊಡಗಿ ನಿರೂಪಿಸಿದರು, ನಾಗಭೂಷಣ ಸ್ವಾಮಿ
ಸ್ವಾಗತಿಸಿದರು.

