ಸುದ್ದಿ ಸಂಗ್ರಹ ಶಹಾಬಾದ
ರಂಜಾನ್ ಮತ್ತು ಹೋಳಿ ಹಬ್ಬ ಶಾಂತಿ- ಸೌಹಾರ್ದತೆಯ ಸಂಕೇತವಾಗಿದ್ದು, ಹಬ್ಬಗಳು ಸಂತೋಷದಿಂದ ಆಚರಿಸಿ, ಯುವಕರು, ಮಕ್ಕಳು ಮಾಡುವ ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೆ ಪರಿಹರಿಸುವ ಮೂಲಕ ಹಬ್ಬಗಳಲ್ಲಿ ಶಾಂತಿ- ಸೌಹಾರ್ದತೆ ಕಾಪಾಡಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ರಂಜಾನ್ ಮತ್ತು ಹೋಳಿ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 3-4 ದಿನದಲ್ಲಿ ಬಿಸಿಲಿನ ಝಳ ಹೆಚ್ಚಲಿದ್ದು, ಜನರು ಈ ವಾತಾವರಣಕ್ಕೆ ಹೊಂದಿಕೊಳ್ಳುವದು ಅಗತ್ಯವಾಗಿದೆ, ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿಐ ಪಿ.ಎಸ್ ವನಂಜಕರ್, ಪೌರಾಯುಕ್ತ ಫಕ್ರೋದ್ದಿನ್, ಜೆಸ್ಕಾಂ ಎಸ್‌ಒ ಮಹೇಶ, ಮಜೀದ್ ಸಮಿತಿ ಅಧ್ಯಕ್ಷ ಮತೀನ್ ಸೇಠ್, ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ, ಮುಖಂಡರಾದ ಕನಕಪ್ಪ ದಂಡಗುಲಕರ್, ನಿಂಗಣ್ಣ ಹುಳಗೋಳ, ಕುಮಾರ ಚವ್ಹಾಣ, ಮ.ರಫೀಕ್ ಬಾಗವಾನ್, ಅರುಣಕುಮಾರ ಪಟ್ಟಣಕರ್ ಮಾತನಾಡಿದರು.
ಹೋಳಿ ಹಬ್ಬದ ಪ್ರಯುಕ್ತ ನಗರಸಭೆಯಿಂದ ಸಮರ್ಪಕ ನೀರು ಸರಬರಾಜು ಮಾಡಲು ಹಾಗೂ ಬಣ್ಣದಾಟದ ಮೆರವಣಿಗೆ ಹೋಗುವ ಮಾರ್ಗ ಸ್ವಚ್ಚಗೊಳಿಸಲು ಶಂಕರವಾಡಿ ಬ್ರೀಜ್, ಗೋಳಾ(ಕೆ) ಗ್ರಾಮದ ಬಳಿಯ ಬ್ರೀಜ್ ಕಂ.ಬ್ಯಾರೇಜ್ ಬಳಿ ಯುವಕರು ಸ್ನಾನಕ್ಕೆ ಹೋಗುವದರಿಂದ ಅಲ್ಲಿ ಪೊಲೀಸ್ ಸಿಬ್ಬಂದಿಯ ನಿಯೋಜಿಸಲು ಸಾರ್ವಜನಿಕರು ಮನವಿ ಮಾಡಿದರು.
ಪಿಎಸ್‌ಐ ಚಂದ್ರಕಾಂತ ಮೆಕಾಲೆ, ಮುಖಂಡರಾದ ನಾಗರಾಜ ಮೇಲಗಿರಿ, ನಿಂಗಣ್ಣ ಪೂಜಾರಿ, ಸುಭಾಷ ಸಾಕ್ರೆ, ಸುಭಾಷ ಜಾಪುರ, ದಿನೇಶ ಗೌಳಿ, ರಾಮು ಕುಸಾಳೆ, ಬಸವರಾಜ ಸಾತಿಹಾಳ, ಕಿರಣ ಚವ್ಹಾಣ, ದೇವರಾಜ ರಾಠೋಡ, ಜಹೀರ ಅಹ್ಮದ ಪಟವೆಗಾರ, ರಾಜಶೇಖರ್ ಹೋನಗುಂಟಿಕರ್, ಶರಣು ಪಗಲಾಪುರ್, ಮಲ್ಲಿಕಾರ್ಜುನ ಕಟ್ಟಿ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ನಿರೂಪಿಸಿದರು.

