Site icon ಸುದ್ದಿ ಸಂಗ್ರಹ

ಮಾ.3ರಂದು ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ: ಶಿವರಾಜ ಅಂಡಗಿ

ಸುದ್ದಿ ಸಂಗ್ರಹ ಕಲಬುರಗಿ
ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರುಗಡೆಯ ವಿದ್ಯಾನಗರದಲ್ಲಿ ವೆಲ್‌ಫೆರ್ ಸೊಸೈಟಿ ವತಿಯಿಂದ ಮಾರ್ಚ್ 3 ರಂದು ಸಂಜೆ 7.30ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನದ ಆವರಣದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ 29ನೇ ವಾರ್ಷಿಕೋತ್ಸವ ಮತ್ತು ಕಾಮದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.

ಇಂದಿನ ಯುವ ಪೀಳಿಗೆಗೆ ಹೋಳಿ ಹಬ್ಬ ಎಂದರೆ ಮೈಮೇಲಿನ ಬಟ್ಟೆ ಹರಿದುಕೊಳ್ಳುವುದು, ಘಟಾರ ನೀರು ಎರಚುವುದು, ವಾಹನಗಳ ಸೈಲೆನ್ಸರ್ ತೆಗೆದು ಜೋರಾದ ಶಬ್ದದೊಂದಿಗೆ ಗಾಡಿ ಮೇಲೆ 3 ಜನ ಕುಳಿತುಕೊಂಡು ಓಡಾಡಿ ಸಂಭ್ರಮಿಸುವುದೆ ಹೋಳಿ ಹಬ್ಬ ಎಂದು ಆಚರಿಸುತ್ತಿರುವ ಯುವ ಪೀಳಿಗೆಗೆ ಒಂದಿಷ್ಟು ಹೋಳಿ ಹಬ್ಬದ ಹಿರಿಮೆ ಗರಿಮೆ ಕುರಿತು ಅನುಭವ ಹೊಂದಿದ ಹಿರಿಯ ಸಾಹಿತಿಗಳಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬರುತ್ತಿದ್ದೇವೆ ಎಂದರು.

ಇಲ್ಲಿಯವರೆಗೆ ಅನೇಕ ಹಿರಿಯ ಸಾಹಿತಿಗಳಾದ ಡಾ.ಮು.ಗು ಬಿರಾದಾರ, ಎ.ಕೆ ರಾಮೇಶ್ವರ, ಡಾ.ವಾಸುದೇವ ಸೇಡಂ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರುಗಳ ಅನುಭವ ಹಂಚಿಕೊಂಡಿರುವ ಈ ವೇದಿಕೆಯಲ್ಲಿ ಈ ವರ್ಷ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅವರು ಕಾಮದಹನ ದುರಾಸೆಯ ಭಾವ ಬಿಡಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಜಗತ್ ಬಡಾವಣೆಯ ಬಯಲಾಟ ಕಲಾವಿದರಾದ ಅಶೋಕ ಕಾಳೆ ಅವರು ಹೋಳಿ ಹಬ್ಬದ ಹಾಡುಗಳು ಹಾಡಲಿದ್ದಾರೆ. ಕಲಾವಿದ ವಿಶ್ವನಾಥ ತೋಟ್ನಳ್ಳಿ ಅವರಿಂದ ವಿಶೇಷ ಪೋತರಾಜ ನೃತ್ಯ ಮಾಡಲಿದ್ದಾರೆ. ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅವರು ದೇಶಮುಖ ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು. ನಂತರ ತರುಣ ಸಂಘದ ಪದಾಧಿಕಾರಿಗಳಿಂದ ಕಾಮದಹನ ಕಾರ್ಯಕ್ರಮ ಜರುಗುವುದು ಎಂದರು.

Exit mobile version