Site icon ಸುದ್ದಿ ಸಂಗ್ರಹ

ವಾಡಿ: ಬಿಜೆಪಿ ಕಚೇರಿಯಲ್ಲಿ ಆಲಿಸಿದ ಮನ್ ಕಿ ಬಾತ್ ಕಾರ್ಯಕ್ರಮ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೊ ಕಾರ್ಯಕ್ರಮದ ‘ಮನ್ ಕಿ ಬಾತ್’ನ 131ನೇ ಸಂಚಿಕೆಯನ್ನು ಮುಖಂಡರು ಆಲಿಸಿದರ.

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಮೋದಿ ಅವರು ಕರ್ನಾಟಕ ಮತ್ತು ಒಡಿಶಾ ರಾಜ್ಯಗಳ ಕೃಷಿ ಪ್ರಯತ್ನವನ್ನು ಉದಾಹರಣೆಯಾಗಿ ಉಲ್ಲೇಖಿಸಿ “ಭಾರತದ ರೈತರು ಕೇವಲ ಅನ್ನದಾತರಲ್ಲ, ಭೂಮಿಯ ನಿಜವಾದ ಭಕ್ತರು. ಮಣ್ಣನ್ನು ಚಿನ್ನವಾಗಿಸುವ ಕಲೆಯನ್ನು ರೈತರಿಂದಲೆ ಕಲಿಯಬೇಕು” ಎಂದು ಹೇಳಿದ್ದನ್ನು ಪ್ರಶಂಸಿಸಿ ರೈತರ ಕಾಳಜಿಯ ಜೊತೆಗೆ ಅವರ ಪಾಂಡಿತ್ಯದ ಬಗ್ಗೆ ವಿವರಿಸಿರುವದು ಚರ್ಚಿಸಿದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಅಶೋಕ ಪವಾರ, ವಿನೋದ ಕಾನಕುರ್ತೆ, ವಿಶ್ವನಾಥ ಬಳವಡಗಿ ಸೇರಿದಂತೆ ಅನೇಕರು ಇದ್ದರು.

Exit mobile version