Site icon ಸುದ್ದಿ ಸಂಗ್ರಹ

ಕಲಬುರಗಿ: ಸರಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಸುದ್ದಿ ಸಂಗ್ರಹ ಕಲಬುರಗಿ
ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಂದಾಯ ಇಲಾಖೆಯಿಂದ ಗುತ್ತಿಗೆ ಅವಧಿ ವಿಸ್ತರಣೆ ಹಿನ್ನಲೆಯಲ್ಲಿ ವಿಧಿ‌ಸಲಾದ 2.ಕೋಟಿ 3.7 ಲಕ್ಷ ರೂ ಗುತ್ತಿಗೆ ಶುಲ್ಕ ಭರಿಸಲು ಆದೇಶಿಸಲಾಗಿದೆ. ಆದರೆ ಸರ್ಕಾರಿ ನೌಕರರ ಸಂಘಕ್ಕೆ ಯಾವುದೆ ಆದಾಯ ಮೂಲಗಳಿಲ್ಲ ಹೀಗಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಭರಿಸಲು ತೊಂದರೆಯಾಗುತ್ತಿದೆ, ಅದಕ್ಕಾಗಿ ವಿಧಿಸಲಾದ ಗುತ್ತಿಗೆ ಶುಲ್ಕ ಸಂಪೂರ್ಣವಾಗಿ ವಿನಾಯಿತಿಗೊಳಿಸಲು ಸರ್ಕಾರಕ್ಕೆ ತಾವು ಪ್ರಸ್ತಾವನೆ ಸಲ್ಲಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮತ್ತು ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನನಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ವಿಧಿಸಲಾದ ಗುತ್ತಿಗೆ ಶುಲ್ಕ ವಿನಾಯಿತಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಹಮತ ಸೂಚಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಧರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ, ಕೃಷ್ಣಚಾರಿ ಜೋಶಿ, ರಾಜೇಶ ನೀಲಹಳ್ಳಿ , ಸಂತೋಷ ಸಲಗರ, ಅಣ್ಣಾರಾಯ ಹಾಬಾಳಕರ, ಪೀರಪ್ಪ  ರಾಜಶೇಖರ ಕುರಿಕೊಟಾ, ಆನಂದ, ಹುಸೇನ್ ಪಾಶಾ ಸೇರಿದಂತೆ ಅನೇಕರು ಇದ್ದರು.

Exit mobile version