Site icon ಸುದ್ದಿ ಸಂಗ್ರಹ

ಕಾಳಗಿ: ಕಾಲೇಜಿನಲ್ಲಿ ಕಿಡಿಗೇಡಿಗಳ ದಾಂಧಲೆ

ಸುದ್ದಿ ಸಂಗ್ರಹ ಕಾಳಗಿ
ಇಲ್ಲಿನ ದೇವರಾಜ ಮಾಲಿಪಾಟೀಲ ಉಡಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾತ್ರಿ ಕಿಡಿಗೇಡಿಗಳು ದಾಂಧಲೆ ನಡೆಸಿ ಉಪಕರಣಗಳನ್ನು ಒಡೆದು ಹಾಕಿರುವ ಘಟನೆ ಬುಧವಾರ ಕಂಡುಬಂದಿದೆ.

ಎಂದಿನಂತೆ ಸಿಬ್ಬಂದಿ ಬೆಳಿಗ್ಗೆ ಕಾಲೇಜಿಗೆ ಬಂದಾಗ ‘ಯಾರೋ ಕಿಡಿಗೇಡಿಗಳು ಕಾಲೇಜಿನ ಕಚೇರಿ ಬಾಗಿಲು ಮುರಿದು, ಕಂಪ್ಯೂಟರ್, ಟೇಬಲ್ ಮೇಲಿನ ಗಾಜು ಒಡೆದು, ಪ್ರಿಂಟರ್ ಮತ್ತು ವಿದ್ಯುತ್ ಸ್ವಿಚ್ ಗಳನ್ನು ಹಾಳುಮಾಡಿದ್ದು ಕಂಡುಬಂದಿದೆ. ಶೌಚಾಲಯದ ಕೊಠಡಿ ಸಹ ಹಾಳು ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ,
ಕಾನ್‌ಸ್ಟೇಬಲ್‌ ಮೌನೇಶ, ಸಂಗಮೇಶ, ಮಂಜುನಾಥ ಮತ್ತು ಬೆರಳಚ್ಚು ವಿಭಾಗದ ಹೆಡ್ ಕಾನ್‌ಸ್ಟೇಬಲ್ ಸಂತೋಷ, ಶ್ವಾನದಳದ ವಿನೋದ, ಸೈದಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಕಾಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.

Exit mobile version