Site icon ಸುದ್ದಿ ಸಂಗ್ರಹ

ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ‌: ಗಣವೇಷಧಾರಿಗಳಿಗೆ ಜನರಿಂದ ಅದ್ದೂರಿ ಸ್ವಾಗತ

ಚಿತ್ತಾಪುರ: ರಾಜ್ಯದ ಗಮನ ಸೆಳೆದಿರುವ‌ ಆರ್‌ಎಸ್‌ಎಸ್‌ ಚಿತ್ತಾಪುರ ಪಥ ಪಥಸಂಚಲನ ರವಿವಾರ ಮಧ್ಯಾಹ್ನ 3.45ಕ್ಕೆ ಶುರುವಾಯಿತು.

ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಿಂದ ಶುರುವಾದ ಗಣವೇಷಧಾರಿಗಳ‌ ಮೆರವಣಿಗೆ ಮೇಲೆ ನೆರೆದಿದ್ದ ನೂರಾರು ಜನರು ಪುಷ್ಪ ದಳ‌ಗಳನ್ನು ಎರಚಿ ಹುರಿದುಂಬಿಸಿದರು. ನೆರೆದಿದ್ದವರು ‘ಭಾರತ ಮಾತಾಕೀ ಜೈ, ವಂದೆ ಮಾತರಂ ಹಾಗೂ ಜೈ ಶ್ರೀರಾಮ’ ಘೋಷಣೆಗಳನ್ನು ಮೊಳಗಿಸಿದರು.

ಸಾವಿರಕ್ಕೂ ಅಧಿಕ ಪೊಲೀಸ್ ಸರ್ಪಗಾವಲಿನ ಪಥಸಂಚಲನ‌ವು ಕಲ್ಯಾಣ ‌ಮಂಟಪದಿಂದ, ಬಸ್ ನಿಲ್ದಾಣ, ಕನ್ಯಾ ಸರ್ಕಾರಿ ‌ಪ್ರೌಢಶಾಲೆ, ತಾಲೂಕು ಪಂಚಾಯಿತಿ ಎದುರಿನಿಂದ ಮರಳಿ ಕಲ್ಯಾಣ ‌ಮಂಟಪಕ್ಕೆ ತಲುಪಲಿದೆ.

Exit mobile version