ಸುದ್ದಿ ಸಂಗ್ರಹ

ದಿಗ್ಗಾಂವ ಗ್ರಾಮದ 120 ಮನೆಗಳಲ್ಲಿ ನುಗ್ಗಿದ ಮಳೆ ನೀರು, ತಹಸೀಲ್ದಾರ್ ಭೇಟಿ

ಚಿತ್ತಾಪುರ: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ದಿಗ್ಗಾಂವ ಗ್ರಾಮದ 110 ರಿಂದ 120 ಮನೆಯೊಳಗೆ ಹಳ್ಳದ ನೀರು ನುಗ್ಗಿದೆ, ಇದರಿಂದ ಅಪಾರ ಪ್ರಮಾಣದ ಆಹಾರ ಸಾಮಗ್ರಿಗಳು ಹಾಳಾಗಿವೆ.

ತಾಲೂಕಿನ ದಿಗ್ಗಾಂವ ಗ್ರಾಮಕ್ಕೆ ತಹಸೀಲ್ದಾರ್ ನಾಗಯ್ಯ
ಹಿರೇಮಠ ಭೇಟಿ ನೀಡಿದರು.

ಗ್ರಾಮದ ಸುಮಾರು 110 ರಿಂದ 120 ಮನೆಗಳಲ್ಲಿ ಮಳೆ ನೀರು ನುಗ್ಗಿದೆ, ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನೆ, ಹಾನಿಯಾದವರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಪರಿಹಾರ ಕೊಡಲಾಗುವದು ಎಂದರು.

ಚಿತ್ತಾಪುರ ವ್ಯಾಪ್ತಿಯಲ್ಲಿ 53.6 ಎಂಎಂ, ನಾಲವಾರದಲ್ಲಿ 20.2 ಎಂಎಂ, ಅಳ್ಳೊಳ್ಳಿಯಲ್ಲಿ 20.2 ಎಂಎಂ ಮಳೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಹರಳಯ್ಯ ಬಡಿಗೆರ, ಸಿದ್ದಣ್ಣಗೌಡ ಆರ್.ಡಿ, ಶ್ರೀಮಂತ ಗುತ್ತೇದಾರ, ಶರಣು ಸೇರಿದಂತೆ ಅನೇಕರು ಇದ್ದರು.


Exit mobile version