Site icon ಸುದ್ದಿ ಸಂಗ್ರಹ

ಅಯ್ಯಪ್ಪ ಸ್ವಾಮಿ ಮಹಾಪಡಿ ಪೂಜೆ: ಭಕ್ತಿಯಲ್ಲಿ ಮಿಂದೆದ್ದ ಅಯ್ಯಪ್ಪ ಮಾಲಧಾರಿಗಳು

ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ 20ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪಡಿ ಪೂಜಾ ಕಾರ್ಯಕ್ರಮ ಆನಂದಕುಮಾರ ಗುರುಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಶ್ರದ್ಧೆ ಭಕ್ತಿ, ಸಂಭ್ರಮ, ಸಡಗರದಿಂದ ಅದ್ಧೂರಿಯಾಗಿ ನಡೆಯಿತು.

ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಕ್ತಿಯಲ್ಲಿ ಮಿಂದೆದ್ದರು. ಶ್ರೀಕಾಂತ ಲಂಭೋದರ ಗುರುಸ್ವಾಮಿ ಹಾಗೂ ಅವರ ತಂಡದಿಂದ ನವಗೃಹ ಪೂಜೆ, ಗಣಪತಿ ಪೂಜೆ, ಲಕ್ಷ್ಮಿ ಪೂಜೆ, ಸುಬ್ರಹ್ಮಣ್ಯ ಪೂಜೆ, ಅಯ್ಯಪ್ಪ ಅಭಿಷೇಕ ಹಾಗೂ ಮಹಾಪಡಿ ಪೂಜೆ ನಡೆಯಿತು. ಕಾರ್ತಿಕ ನಾರಾಯಣಪೇಟ್ ಅವರ ತಂಡದಿಂದ ಅಯ್ಯಪ್ಪ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆನಂದಕುಮಾರ ಗುರುಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಂಬಳೇಶ್ವರದ ಸೋಮಶೇಖರ ಶಿವಾಚಾರ್ಯರು, ಅರ್ಚಕ ಸೂರ್ಯಕಾಂತ ಧನವಾಡಕರ್, ಆನಂದಕುಮಾರ ಗುರುಸ್ವಾಮಿ, ಚಂದ್ರಶೇಖರ ಗುರುಸ್ವಾಮಿ, ರಂಗಾಸ್ವಾಮಿ ಸೇಡಂ, ಸಿದ್ದು ಸೂನಾರ್ ಗುರುಸ್ವಾಮಿ, ಲಕ್ಷ್ಮಿಕಾಂತ ಗುರುಸ್ವಾಮಿ, ಉಮೇಶ ಗುರುಸ್ವಾಮಿ, ಸಂತೋಷ ಪೂಜಾರಿ, ಬಸವರಾಜ ಪಾಟೀಲ ಬೆಳಗುಂಪಾ, ಶರಣರೆಡ್ಡಿ ಇಜಾರ್, ಸೋಮು ಟೋಕಾಪೂರ, ಆನಂದ ಕಾಶಿ, ಸಿದ್ದು ಸ್ವಾಮಿ, ಆಕಾಶ ಸ್ವಾಮಿ, ಪೃಥ್ವಿ, ಮಹೇಶ ಕಾಶಿ, ವಿಠಲ ಕಟ್ಟಿಮನಿ, ಶರಣು, ಬಸವರೆಡ್ಡಿ, ಬಸವರಾಜ, ಅಶ್ವಥ, ಹಣಮಂತ ಇಂಗಳಗಿ, ಮಲ್ಲು ಇಂಗಳಗಿ, ಶ್ರೀಧರ ವಾರದ್, ಉಮೇಶ ಕಾಶಿ, ಬನ್ನಪ್ಪ ಸೇಡಂ, ಭೀಮು ಸೇಡಂ ಸೇರಿದಂತೆ ಅನೇಕರು ಇದ್ದರು.

Exit mobile version